Thursday, May 15, 2025

Muttaide yaagirabeku

 ಶ್ರೀಪುರಂದರದಾಸರ ಕೃತಿ


ರಾಗ : ಸಾರಂಗ

ಆದಿತಾಳ


ಮುತ್ತೈದೆಯಾಗಿರಬೇಕು ಮುದದಿಂದಲಿ |

ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು 

॥ಪ॥


ಗುರುಮಧ್ವಶಾಸ್ತ್ರವನು ಓದುವುದೆ ಮಾಂಗಲ್ಯ |

ವರವೈರಾಗ್ಯವೆಂಬ ಒಪ್ಪುವ ಮೂಗುತಿ ||

ತಾರತಮ್ಯದರಿಮೆ ತಾಯಿತಿ ಮುತ್ತುಸರ |

ಕರುಣರಸಗಳೆ ಉಳ್ಳ ಕಟ್ಟಾಣಿ ಕಟ್ಟಿಕೊಂಡು ॥೧॥


ಹರಿಕಥೆಯ ಕೇಳುವುದೆ ಕಿವಿಗೆ ಮುತ್ತಿನ ಓಲೆ |

ನಿರುತ ಸತ್ಕರ್ಮವೇ ನಿಜಕಾಂತಿಯು ||

ಪರಮ ಭಕ್ತರ ಪಾದರಜ ಹರಳು ಬಂಗಾರ |

ಗುರುಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ ॥೨॥


ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು |

ಕೊಡುವ ಧರ್ಮವೆಂಬ ಕುಪ್ಪಸವ ತೊಟ್ಟು ||

ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ |

ಧೃಡ ಭಕ್ತಿಯೆಂಬಂಥ ಕಡಗ - ಬಳೆ ಇಟ್ಟುಕೊಂಡು ॥೩॥


No comments:

Post a Comment

Aaj ki raat - Stree 2

Movie: Stree2 (2024) Music: Sachin-Jigar Lyrics: Amitabh Bhattacharya Singers:  Madhubanti Bagchi and Divya Kumar Bande toh kya is husn pe f...