ಶ್ರೀವಿಜಯದಾಸಾರ್ಯ ವಿರಚಿತ ಶ್ರೀರಾಮದೇವರ ಸ್ತುತಿ ಪದ.
ರಾಗ : ವಸಂತ
ಆದಿತಾಳ
ರಾಮ ರಘುಕುಲಾಬ್ಧಿ ಸೋಮಾ ||ಪ||
ಸಂತತ ಭಕ್ತ ಪ್ರೇಮಾ ಮಂಗಲಧಾಮಾ |
ಪರಿಪೂರ್ಣ ನಿನ್ನಯ ನಾಮವೆ ಗತಿ ಎನಗೆ ||ಅ.ಪ||
ಏಸಪರಾಧಗಳೆಣಿಸದೆ ದಯವಿಟ್ಟು |
ದೋಷದೂರನ ಮಾಡೊ ಕೇಶವ ಕಮಲಾಕ್ಷಾ ||1||
ಪ್ರಣವಾಕಾರ ವಿಮಾನ ಮನಿಯಾಗಿಯಿಪ್ಪನೆ |
ಫಣಿಶಾಯಿ ರಂಗೇಶ ಮಣಿಗಣ ಭೂಷಣನೆ||2||
ಇಕ್ವಾಕು ನೃಪವರದ ಸಾಕ್ಷಾತ್ತ ಪರಮಾತ್ಮಾ-|
ಅಧ್ಯಕ್ಷ ವಿಜಯವಿಠ್ಠಲಾ ರಕ್ಷಿಸು ಬಿಡದೆನ್ನ||3||
No comments:
Post a Comment